ಗಾಥಾ 1

ಈ ಶಬ್ದ ವೇದಗಳಲ್ಲಿ ಸ್ತೋತ್ರರೂಪ ಶ್ಲೋಕವೆಂಬ ಅರ್ಥದಲ್ಲಿಯೂ ಸಂಸ್ಕøತದಲ್ಲಿ ಹಾಡುವ ಗಾದೆಯಂಥ ಸೂಕ್ತಿಯೆಂಬ ಅರ್ಥದಲ್ಲಿಯೂ ಪ್ರಾಕೃತದಲ್ಲಿ ಆರ್ಯಾವೃತ್ತಕ್ಕೆ ಸಮಾನವಾದ ಒಂದು ಮಾತ್ರಾವೃತ್ತದ ಛಂದೋಬಂಧವೆಂದೂ ಬಳಕೆಯಲ್ಲಿದೆ (ನೋಡಿ- ಗಾಥಾ-2). ಆದರೆ ಇದು ಬಹಳಷ್ಟು ಪ್ರಸಿದ್ಧಿಗೆ ಬಂದುದು ಪ್ರಾಚೀನ ಪಾರಸಿಕರ ಪವಿತ್ರ ಗ್ರಂಥವಾದ eóÉಂಡ್ ಅವೆಸ್ತದ ಒಂದು ಭಾಗವಾಗಿರುವುದರಿಂದಲೇ ಎನ್ನಬಹುದು.

	ಕ್ರಿಸ್ತಪೂರ್ವ ಏಳನೆಯ ಶತಮಾನದ ವೇಳೆಗೆ ಆಕಿಮೋನಿಯನ್ ಚಕ್ರವರ್ತಿಗಳಾದ ಡೇರಿಯಸ್ ಮುಂತಾದವರ ಕಾಲದಲ್ಲಿ ಈ ಪವಿತ್ರಗ್ರಂಥ ಸಾಕಷ್ಟು ಪ್ರಚಾರಗೊಂಡು ಅಲೆಕ್ಸಾಂಡರನ ದಂಡಯಾತ್ರೆಯ ಹೊತ್ತಿಗೆ ಪ್ರಸಿದ್ಧಿಗೆ ಬಂದಾಗಿತ್ತು. ಭಾರತದಲ್ಲಿ ವೇದಗಳಿರುವ ಮಹತ್ತ್ವದ ಸ್ಥಾನವೇ ಅವೆಸ್ತಕ್ಕೆ ಅಂದಿನಿಂದ ಇಂದಿನವರೆಗೂ ಪಾರಸಿಕರಿಂದ ದತ್ತವಾಗಿದೆ. ಈ ಗ್ರಂಥ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಬಂದು ಈಗ ಬಹು ವಿಸ್ತಾರವಾಗಿದೆ. ಅದರ ಪ್ರಾಚೀನತಮ ಭಾಗವೇ eóÉೂರಾಸ್ಟರನ ಮೂಲ ಸಂದೇಶವನ್ನೊಳಗೊಂಡ ಪದ್ಯರೂಪವಾದ ಗಾಥೆಗಳೆಂದು ವಿದ್ವಾಂಸರು ಭಾವಿಸುತ್ತಾರೆ.

	ಅವೆಸ್ತದ ಗಾಥೆಗಳು ಐದು ವೃತ್ತಜಾತಿಗಳನ್ನೊಳಗೊಳ್ಳುತ್ತವೆ : 1 ಅಹುನ ವೈತಿ, 2 ಉಷ್ತವೈತಿ, 3 ಸ್ಪೆಂಟ ಮೆಯ್ನ್ಯು, 4 ವೊಹುಕ್ಷಥ್ರ ಮತ್ತು 5 ವಹಿಸ್ಟೋಯಿಸ್ಟಿ. ಮಿಕ್ಕ ಭಾಗಗಳಿಗಿಂತ ಗಾಥೆಗಳಲ್ಲಿ eóÉೂರಾಸ್ಟರನ ವೈಯಕ್ತಿಕ ಉಪದೇಶಗಳೂ ಬೋಧನಗಳೂ ಎದ್ದು ಕಾಣುತ್ತವೆ. ಅಹುರಮಜû್ಡ (ಒಳ್ಳೆಯದರ ಅಧಿದೈವ) ಮತ್ತು ಅಹ್ರಿಮನ್ (ಕೆಟ್ಟದರ ಅಧಿದೈವ) - ಇವುಗಳ ನಿತ್ಯಸ್ಪರ್ಧೆ, ಇದರಲ್ಲಿ ಮನುಷ್ಯನ ಸಂಬಂಧ, ಕಟ್ಟಕಡೆಗೆ ಅಧರ್ಮನಾಯಕನಾದ ಅಹ್ರಿಮನ್ನನ ವಿನಾಶ - ಇವು ಗಾಥೆಗಳಲ್ಲಿ ಬರುವ ಮುಖ್ಯಾಂಶಗಳು.
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ